Monday 10 May, 2010

ಕಹಿ ಸತ್ಯ
ಹಸಿವಿಗೆ ಅಲೆದ

ಇರುವೆಗಳು

ಬೆಲ್ಲವಿಟ್ಟಾಗ ಬರದೆ

ಬೇವಿಟ್ಟಾಗ ಮುತ್ತಿಕೊಂಡವು



 ಆಗಸಕ್ಕೆ ರೆಕ್ಕೆ

ಚಿಗುರು ನೀನಲ್ಲ

ಮಳೆಯು ನಾನಲ್ಲ

ಉದುರಿದ ತರಗಲೆಗಳು

ಚಿಗುರೋಡೆಯಲು ತವಕಿಸುತ್ತಿವೆ

ಕರಗುವ ಮುನ್ನ

ಮನವು ಹಗುರಾಗಲೆಂದು


ಅಧಿಕಾರಶಾಹಿ

ಹಣ್ಣಾದ ಎಲೆಗಳು

ಉದುರಿದಾಗ

ಚಿಗುರೆಲೆಯ ನೋಡಿ

ಮರಕೆ ಕೊಡಲಿ ಇಟ್ಟವು



Liquid beef

ಗೋ ಹತ್ಯೆ ನಿಷೇಧವನ್ನು

ಪ್ರಸ್ತಾಪಿಸಿದಾಗ

ತನ್ನ ಕರುವು

ಕೆಚ್ಚಲನ್ನು ಹೀರಿಕೊಂಡು

ಜಾರಿಗೆ ತಂದಿತು.

3 comments:

ಮಂಜು said...

ಒಂದು ಉತ್ತಮವಾದ ವಿಮರ್ಶೆ ಪದ್ಯ ರೂಪ ಪಡೆದಿರುವುದು ಕವಿಗಿರುವ ವಾಸ್ತವಿಕ ಪ್ರಜ್ಞೆಗೆ ಸಾಕ್ಷಿ. ತಿಳಿ ಹನಿಯಲ್ಲಿ ಇತ್ತೀಚಿಗೆ ಹೊಸ ಬೆಳಕು ಪ್ರವಹಿಸುತ್ತಿರುವುದು ಹೊಸ ನೋಟಕ್ಕೆ ನಾಂದಿ.

manju

mercy said...

ಎಲ್ಲಾರ ಜೀವನದಲ್ಲಿ ನಡೆಯುತ್ತಿರುವ ಒಂದು ವಿಷಯವಿದು, ಒಳ್ಳೆಯದನ್ನು ಕಲಿಯಲು ಬರದೆ ಇರುವ ಮನುಷ್ಯರು ಬೇವಿನಂಥಹ ಕಹಿಯ ವಿಷಯವನ್ನು ಕಲಿಯಲು ಮಾತ್ರ ಬಹು ಬೇಗನೆ ಸೇರಿ/ಮುತ್ತಿ ಕೊಳ್ಳುವರು.

© ಹರೀಶ್ said...

ಮರ್ಸಿ ಮೇಡಂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು